Articles

ಇದೇನ ದೇಶಭಕ್ತಿ? ಇದೇನಾ ನಿಮ್ಮ ಸಂಸ್ಕೃತಿ..?

ಏನ್ರೀ ಇದು ಕರ್ಮ, ಯಾಕೆ ನಮಗೆ ಈ ಪರಿಸ್ಥಿತಿ? ಎಂತಹಾ ದರಿದ್ರ ಜನರ ಕೈಗೆ ನಮ್ಮಜುಟ್ಟನ್ನು ಕೊಟ್ಟಿದ್ದೇವೆ. ಅಧಿಕಾರ ಎಂದರೆ ತಮ್ಮ ತೆವಲು ಎಂದುಕೊಂಡಿರುವ ಮೂರ್ಖರುರಾಜ್ಯದ ಚುಕ್ಕಾಣಿ ಹಿಡಿಯಲು ಕಾರಣರಾದ ನಮಗೆ ನಾವೇ ಧಿಕ್ಕಾರ ಹೇಳಿಕೊಳ್ಳದೆ ಬೇರೆವಿಧಿಯಿಲ್ಲ. ಕಳೆದ ನಾಲ್ಕೂಕಾಲು ವರ್ಷದಿಂದ ಪರಸ್ಪರ ಕಿತ್ತಾಟ ಬಿಟ್ಟು ಬೇರೆ ಏನೂ ನೋಡುವಭಾಗ್ಯ ನಮಗಿಲ್ಲ.

ಬಿಪಿಎಲ್ ಪೀಳಿಗೆಯನ್ನು ಸೃಷ್ಟಿಸುವ 'ಅನ್ನಭಾಗ್ಯ' ಬೇಕಿತ್ತಾ...?

ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಿಪಿಎಲ್ ಕಾರ್ಡ್ ದಾರರಿಗೆ ಒಂದು ರೂಪಾಯಿಗೆ ಅಕ್ಕಿ ಕೊಡುವ ಯೋಜನೆಯನ್ನು ಸಿದ್ಧರಾಮಯ್ಯ ಕಾರ್ಯಗತಗೊಳಿಸಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕೋ ಅಥವಾ ಅವರ ಈ ದೂರದೃಷ್ಟಿ ಕೊರತೆಯ ಆಡಳಿತಕ್ಕಾಗಿ ಪರಿತಪಿಸಬೇಕೋ ಅರ್ಥವಾಗುತ್ತಿಲ್ಲ. ಯಾಕೆಂದರೆ ಒಂದು ರೂಪಾಯಿಗೆ ಅಕ್ಕಿ ಕೊಡುವ ಮೂಲಕ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಹೊರೆಯನ್ನು ತಲೆ ಮೇಲೆ ಎಳೆದುಕೊಂಡಿದೆ. ಆದರೆ ಜನರಿಗೆ ಇದರಿಂದ ನಷ್ಟವೇ ಹೊರತು ಲಾಭವಂತೂ ಇಲ್ಲ.

ನಿಮ್ಮ ಚಪಾತಿ, ರೊಟ್ಟಿ, ಉಪ್ಪಿಟ್ಟು ಯಾರಿಗೆ ಬೇಕು ಸ್ವಾಮಿ?

ವಿದ್ಯೆಯ ಮಹತ್ವ ಗೊತ್ತಾಗುವುದು ಸಮಾಜದಲ್ಲಿ ಜವಾಬ್ದಾರಿಯಿಂದ ಬೆರೆಯಲು ಶುರುವಾದ ಮೇಲೆ. ವಿದ್ಯೆಯನ್ನು ನಿರ್ಲಕ್ಷಿಸಿದ ಪ್ರತಿಯೊಬ್ಬ ಮನುಷ್ಯನೂ ಯಾವುದಾದರು ಒಂದು ಸಂದರ್ಭದಲ್ಲಿ ಪಶ್ಚತ್ತಾಪ ಪಡದೆ ಇರಲು ಸಾಧ್ಯವೇ ಇಲ್ಲ.

ಪ್ರಪಂಚ ನಮ್ಮತ್ತ ಮುಖ ಮಾಡಿರುವಾಗ ನಾವೇಕೆ ಅಧ:ಪತನದತ್ತ ಮುಖ ಮಾಡಿದ್ದೇವೆ..?

ನಿಜವನ್ನು ನಿಜ ಎಂದು ಹೇಳಲಿಕ್ಕಾಗದ ಭಯದಿಂದ ಬಾಯಿಕಟ್ಟಿಕೊಂಡಿರುವ ಪರಿಸ್ಥಿತಿ ಇಂದು ಯಾಕೆ ಮತ್ತು ಹೇಗೆ ಉಂಟಾಗಿದೆ? ನಿಜವನ್ನು ಎತ್ತಿಹಿಡಿಯಲಾಗದ ಸುಳ್ಳನ್ನು ಖಂಡಿಸಲಾಗದ ಪರಿಸ್ಥಿತಿಯಲ್ಲಿ ಹಕ್ಕುಗಳಿಗೆ ಅರ್ಥ ಇರುವುದಿಲ್ಲ. ಜನರಿಂದ ಚುನಾಯಿತರಾದ ಜನ ಪ್ರತಿನಿಧಿಗಳು ಕೆಲಸ ಮಾಡುತ್ತಿಲ್ಲ ಎಂದು ಕೇಳುವಷ್ಟು ನಿರ್ಭೀತವಾದ ವಾತಾವರಣವೇ ಹೊರಟು ಹೋಗಿದೆ. ಮಾಧ್ಯಮಗಳು, ಮೇಧಾವಿಗಳು, ಬುದ್ಧಿಜೀವಿಗಳು ಕೂಡ ವಾಸ್ತವವನ್ನು ಕಾಣದೇ ಹೋಗಿದ್ದಾರೆಯೇ?

ಜನರಿಗಾಗಿ ಸರ್ಕಾರವೋ? ಪಕ್ಷ ಮತ್ತು ಅವರವರ ಯೋಚನೆಗೆ ಸರಿಯಾಗಿ ಆಡಳಿತವೋ?

ಸ್ವತಂತ್ರ ಭಾರತದಲ್ಲಿ ನಮ್ಮನ್ನಾಳುತ್ತಿರುವ ಸರ್ಕಾರಗಳಿಗೆ ಸಾಮಾಜಿಕ ಪ್ರಜ್ಞೆ, ಜನರ ನಾಡಿಮಿಡಿತ ಯಾಕೆ ಅರ್ಥವಾಗುವುದಿಲ್ಲ. ಜನರಿಗಾಗಿ ಸರ್ಕಾರವೋ? ಅಥವಾ ಅವರವರ ಪಕ್ಷ ಮತ್ತು ಅವರವರ ಯೋಚನೆಗೆ ಸರಿಯಾಗಿ ಆಡಳಿತವೋ? ಈಗ ದೇಶವನ್ನಾಳುತ್ತಿರುವ ಯುಪಿಎ ಸರ್ಕಾರ ಇಡುತ್ತಿರುವ ಹೆಜ್ಜೆಗಳನ್ನು ಗಮನಿಸಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡ ರಾಜನಂತೆ ಗೋಚರಿಸುತ್ತಿದೆ. ಅದರ ನಡೆಗಳು ವಿಚಿತ್ರವಾಗಿವೆ.

ಸರ್ಕಾರ ಅಸ್ಥಿತ್ವಕ್ಕೆ ಬರುವುದಕ್ಕೂ ಮುನ್ನ ಸಣ್ಣಸಣ್ಣ ಘಟನೆಗಳನ್ನೂ ಬೆಟ್ಟ ಮಾಡುತಿದ್ದ ಸಂಘ ಆ ನಂತರ ಯಾಕೆ ಬಾಯಿ ಕಳೆದುಕೊಂಡಿತು..?!

ಅಂದು ನಾಲ್ಕು ವರ್ಷದ ಹಿಂದೆ ನನ್ನನ್ನೂ ಸೇರಿದಂತೆ ನೂರಾರು ಪ್ರಾಮಾಣಿಕ ಕಾರ್ಯಕರ್ತರನ್ನು ಈ ಬಿಜೆಪಿ ಸರ್ಕಾರ ಉಳಿಸುವ ಸಲುವಾಗಿ ಸುಳ್ಳು ಮೊಕದ್ದಮೆಗಳನ್ನ ದಾಖಲಿಸಿ ಜೈಲಿಗಟ್ಟುವ ಪ್ರಕ್ರಿಯೆ ನಡೆದಿತ್ತು.

ಜಯಕಿರಣ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಈ ಕೆಳಗಿನ ಲೇಖನಕ್ಕೆ ಆ. ೨೧ ರಂದು ಪ್ರಶಾಂತ್ ಭಂಡಾರಿ ಅಂಡಿಂಜೆ ಎಂಬವರು ಬರೆದ ಪತ್ರಕ್ಕೆ ಪ್ರತಿಕ್ರಿಯೆ.

ಸಂಘಪರಿವಾರದಿಂದ ಹೊರಹೆಜ್ಜೆ ಇಟ್ಟವರು ಯಾರೂ ಬಹಿರಂಗವಾಗಿ ಸಂಘದ ವಿರುದ್ದ ಮಾತನಾಡುವ, ಸತ್ಯಹೇಳುವ ಧೈರ್ಯ ಮಾಡುವುದಿಲ್ಲ. ಯಾಕೆ ಎಂಬ ನನ್ನ ಹಲವಾರು ದಿನಗಳ ಪ್ರಶ್ನೆಗೆ ಈಗಉತ್ತರ ಸಿಗುತ್ತಿದೆ.

ಕಟ್ಟರ್ ಹಿಂದುತ್ವದ ಪ್ರತಿಪಾದಕರಂತೆ ಕಾಣುತ್ತಿದ್ದ ಮಹೇಂದ್ರ ಕುಮಾರ್ ಪ್ರತಿಪಾದಿಸುತ್ತಿರುವ ಹಿಂದುತ್ವ ಯಾವುದು...?

(ಪತ್ರಿಕೆ: ಚರ್ಚ್ ದಾಳಿಯ ಹೊಣೆ ಹೊತ್ತು ಜೈಲು ಸೇರಿದ್ದ ಮಹೇಂದ್ರ ಕುಮಾರ್ ಈಗ ಜಾತ್ಯತೀತ ಜನತಾದಳದ ರಾಜ್ಯ ಮುಖಂಡ. ಮಾತಿಗೆ ಕೂತರೆ ನಿರರ್ಗಳ ಮಾತುಗಾರಿಕೆ. ತಾನು ನಂಬಿದ ಸಿದ್ದಾಂತಕ್ಕೆ ಬದ್ಧತೆ ಹೊಂದಿರುವ ಮಹೇಂದ್ರ ಕುಮಾರ್ ಇವತ್ತಿಗೂ ಯುವಜನರ ಆಕರ್ಷಣೆ. ಮೊನ್ನೆ ಪಡುಬಿದ್ರಿಗೆ ಬಂದ ಸಂದರ್ಭದಲ್ಲಿ ಹೆಚ್ಚಿನ ಯುವಕರು ಮಹೇಂದ್ರ ಭಾಷಣಕ್ಕಾಗಿ ಕಾದು ಕೂತಿದ್ದರು. ಮಹೇಂದ್ರ ಹಿಂದುತ್ವ ಸಿದ್ದಾಂತದಿಂದ ಜಾತ್ಯತೀತ ನಿಲುವಿಗೆ ಬದಲಾಗಿದ್ದು ಹೇಗೆ? ನಿಜಕ್ಕೂ ಮಹೇಂದ್ರ ಪ್ರತಿಪಾದಿಸುತ್ತಿರುವ ಹಿಂದುತ್ವ ಯಾವುದು? ಪತ್ರಿಕೆಗೆ ಮಹೇಂದ್ರ ಕುಮಾರ್ ಉತ್ತರಿಸಿದ್ದಾರೆ....)

ವಂದೇ ಮಾತರಂ...

ಕೆಲವರಿಗೆ ಹೋರಟ ಮತ್ತು ಅದರ ನಾನಾ ಮಜಲುಗಳು ಗೊತ್ತಿಲ್ಲದೆ ಮಾತಾಡುತ್ತಾರೆ, ಮೇಲ್ಮುಖ ವಿಚಾರಗಳನ್ನು ಮಾತ್ರ ಗಮನಿಸಿ ಟೀಕಿಸುತ್ತಾರೆ. ಪ್ರಾಮಾಣಿಕವಾದ ಹೋರಾಟಗಳಿಗೆ ಏನೆಲ್ಲ ಬೆಲೆ ತೆರಬೇಕಾಗುತ್ತದೆಂದು ಅನುಭವಿಸಿದವರಿಗೆ ಮಾತ್ರ ಗೊತ್ತಾಗೋದು. ದೂರದಿಂದ ಗಮನಿಸಿ ಮಾತನಾಡುವುದು ಸುಲಭ. ನಾನು ಸಂಘಪರಿವಾರದ ಬಗ್ಗೆ ಹೇಳುವಾಗ ಸಾಕಷ್ಟು ಜನರಿಗೆ ಬೇಜಾರುಗುತ್ತೆ. ಸತ್ಯ ಕಹಿ ಅಂತಾರಲ್ಲ ಹಾಗೆ. ನಾನು ಮತ್ತು ನನ್ನೊಂದಿಗೆ ಒಂದಷ್ಟು ಹುಡುಗರು ಅನುಭವಿಸಿದ ಯಾತನೆ ದೂರದಲ್ಲಿ ಕುಳಿತು ಟೀಕಿಸುವವರಿಗೆ ಅರ್ಥವಾಗುವುದಿಲ್ಲ. ಏನೇ ಹೇಳಿದರು ಜೆ.ಡಿ.ಎಸ್ ಎಂಬ ಪಟ್ಟ ಕಟ್ಟುವ ಪ್ರಯತ್ನ ಮಾಡುತ್ತಾರೆ. ಆದರೆ ನನಗೆ ರಾಜಕೀಯದ ಅಗತ್ಯವಿಲ್ಲ. ಯಾರನ್ನು ಮೆಚ್ಚಿಸುವ ದರ್ದಿಲ್ಲ. ಯುವಕರು ಅವರಿಗೆ ಅರಿವಿಲ್ಲದೆ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಬೇಕು ಎಂಬುವುದೇ ನನ್ನ ಗುರಿ.

ಜ್ನಾನಿಗಳಿಗೆ ಸಾವಿಲ್ಲ. ಆದರೆ ಗಡ್ಕರಿ, ದಾವೂದ್ ನಂತಹಾ ಬುದ್ದಿವಂತರಿಗೆ ಸಾವಿದೆ!

ಸ್ವಾಮಿ ವಿವೇಕಾನಂದರು ಮತ್ತು ದಾವೂದ್ ಇಬ್ರಾಹಿಂ, ಇಬ್ಬರೂ ಸಮಾನ ಬುದ್ದಿವಂತರು. ಸ್ವಾಮಿ ವಿವೇಕಾನಂದರು ತಮ್ಮ ಬುದ್ದಿವಂತಿಕೆಯನ್ನು ಸದುಪಯೋಗ ಪಡಿಸಿಕೊಂಡರು. ಆದರೆ ದಾವೂದ್ ಇಬ್ರಾಹಿಂ ದುರುಪಯೋಗ ಪಡಿಸಿಕೊಂಡ. ಈ ಹೇಳಿಕೆಯನ್ನು ದೇಶದ ಮಹಾನ್ ರಾಷ್ಟ್ರಭಕ್ತಿಯ ಪ್ರತೀಕ ಎಂದು ಹೇಳಿಕೊಳ್ಳುವ ಭಾರತೀಯ ಜನತಾಪಕ್ಷದ, ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿ ಏಕಾಏಕಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬಾಯಿಂದ ಉದುರಿರುವ ಅಣಿಮುತ್ತುಗಳು..

× Join us on WhatsApp!