Home

ನಮ್ಮ ಧ್ವನಿ

ಈ ದೇಶವನ್ನ ಪ್ರೀತಿಯಿಂದ ಸೌಹಾರ್ದಯುತವಾಗಿ ಸಾಮರಸ್ಯದಿಂದ ಕಟ್ಟುವ ಜವಾಬ್ದಾರಿ ನಮ್ಮಲ್ಲೆರ ಹೆಗಲ ಮೇಲಿದೆ, ಇತ್ತೀಚಿಗಿನ ದಿನಗಳಲ್ಲಿ ದುಷ್ಟಶಕ್ತಿಗಳ ಅಟ್ಟಹಾಸ ಮಿತಿಮೀರುವುದನ್ನ ಮನಗಂಡು
ಆ ದುಷ್ಟ ಶಕ್ತಿಗಳನ್ನು ಮೆಟ್ಟಿ ನಿಲ್ಲುವ ಉದ್ದೇಶದಿಂದ ದೇಶವನ್ನ ಸೌಹಾರ್ದಯುತವಾಗಿ ಕಟ್ಟಲು ಬಯಸುವ ಮನಸ್ಸಗಳ ಒಗ್ಗೂಡುವಿಕೆಗಾಗಿ ಈ ಅಭಿಯಾನ ಪ್ರಾರಂಭಿಸಲಾಗಿದೆ. ದೇಶ ರಕ್ಷಣೆಗಾಗಿ ನಮ್ಮ ಧ್ವನಿ…

Youtube

Facebook

Patreon

About Mahendra Kumar

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಕೃಷಿ ಕುಟುಂಬದಲ್ಲಿ ಜನಿಸಿದ ಮಹೇಂದ್ರ ಕುಮಾರ್ ಅವರಿಗೆ ಇಬ್ಬರು ಸಹೋದರರು ಇಬ್ಬರು ಸಹೋದರಿಯರು . ತಂದೆ ದಿವಂಗತ ರಾಮೇಗೌಡ ,ತಾಯಿ ಸುನಂದಮ್ಮ . ಬಾಲ್ಯದಿಂದಲೂ ಸಾಮಾಜಿಕ ಚಿಂತನೆಯ ಕಡೆ ಹೆಚ್ಚು ಪ್ರಭಾವ, ದಲಿತ ಪರ ನಿಲುವು .ಅಂದಿನ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಚಳವಳಿಯ ಬಿ.ಕೆ ಸುಂದರೇಶ್ ಕಡೆ ಒಲವು ಹೊಂದಿದ್ದರು ಸಹ, ಸಹೋದರನ ಕಾರಣಕ್ಕಾಗಿ ಜನತಾದಳದಲ್ಲಿ ಕಾರ್ಯಕರ್ತ, ಶಿಕ್ಷಣ ಸಚಿವರಾಗಿದ್ದ, ಮಲೆನಾಡ ಗಾಂಧಿ ಎಂದೇ ಖ್ಯಾತರಾಗಿದ್ದ ಎಚ್ ಜಿ ಗೋವಿಂದೇಗೌಡರ ಅನುಯಾಯಿ. ಅನಂತರ ದೇಶಪ್ರೇಮ ಎಂಬ ನಿಲುವಿಗೆ ಅಂಟಿಕೊಂಡು ಇಸವಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಡೆ ಪಯಣ. ಅನಂತರ 1999 ಇಸವಿಯಲ್ಲಿ ಭಜರಂಗದಳದ ತಾಲ್ಲೂಕು ಸಂಚಾಲಕರಾಗಿ, ಅನಂತರ 2002 ಇಸವಿಯಲ್ಲಿ ಜಿಲ್ಲಾ ಸಂಚಾಲಕನಾಗಿ ಅನಂತರ 2003ರಲ್ಲಿ ವಿಭಾಗ ಸಂಚಾಲಕನಾಗಿ, ಆ ನಂತರ ಬಜರಂಗದಳ 2004ರಲ್ಲಿ ರಾಜ್ಯ ಸಂಚಾಲಕರಾಗಿ 4 ವರ್ಷಗಳ ಕಾಲ ಸಂಘಟನೆಯಲ್ಲಿ ಸಕ್ರಿಯ‍, ಆ ನಂತರ ದೇಶ ಧರ್ಮದ ರಾಜಕೀಯವನ್ನು ಖಂಡಿಸಿ, ಭಜರಂಗದಳದಿಂದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಹೊರಬಂದು 2011 ಇಸವಿಯಲ್ಲಿ ಎಚ್ ಡಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜನತಾ ದಳ ಸೇರ್ಪಡೆ. ಅನಂತರ ತಾನು ಅಂದುಕೊಂಡಿರುವ ಸಾಮಾಜಿಕ ಚಿಂತನೆಗಳಿಗೆ ಜನತಾದಳವು ಪೂರಕವಾಗಿಲ್ಲ ಎಂಬ ಅರಿವಿನೊಂದಿಗೆ ರಾಜಕೀಯದಿಂದಲೇ ದೂರ ಸರಿದು ಸಾಮಾಜಿಕ ಹೋರಾಟಗಳಲ್ಲಿ, ಸಾಮಾಜಿಕ ಚಿಂತನೆಗಳನ್ನು ಯುವಕರಿಗೆ ಅರಿವು ಮೂಡಿಸುವ ಸಲುವಾಗಿ ದೇಶದಲ್ಲಿ ಧರ್ಮಾತೀತ ವ್ಯವಸ್ಥೆ ಮತ್ತು ಜಾತ್ಯತೀತ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಗುರಿಯೊಂದಿಗೆ 18 October, 2018ರಲ್ಲಿ ನಮ್ಮ ಧ್ವನಿ ಎಂಬ ಜನಾಂದೋಲನವನ್ನು ರೂಪಿಸುವತ್ತ ಹೆಜ್ಜೆ .

Subscribe to our
youtube channel

We make videos to raise awareness in the society.

Help us reach more people by subscribing and sharing our videos.

× Join us on WhatsApp!